音が流れない場合、再生を一時停止してもう一度再生してみて下さい。
ツール 
画像
Ananta Hegde Dantalige
270回再生
ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ "ಸಂವಾದ ಪಂಚಕ"ದ ಉದ್ಘಾಟನೆ.ಉದ್ಘಾಟಕರಾದ N K ಭಟ್ಟ ಅಗ್ಗಾಶಿಕುಂಬ್ರಿಯವರ ಮಾತು

ಗಣಪತಿಯ ಪ್ರಾರ್ಥನೆಯೊಂದಿಗೆ ತಾಳಮದ್ದಳೆಯ ಸಂವಾದ ಪಂಚಕದ ಉದ್ಘಾಟನೆ.
ಪ್ರಾರ್ಥನೆ: ಅನಂತ ಹೆಗಡೆ ದಂತಳಿಗೆ ಮತ್ತು ನಾಗಪ್ಪ ಕೋಮಾರ್.
ಪ್ರಾಸ್ತಾವಿಕ ನುಡಿ: ನರಸಿಂಹ ಭಟ್ಟ ಕುಂಕಿಮನೆ.
ಕಾರ್ಯಕ್ರಮ ನಿರ್ವಹಣೆ: ಪಂಚಮಿ ಹಸರಪಾಲ್

ಆತ್ಮೀಯರೇ ನಮಸ್ಕಾರ🙏. ಮೂರ್ನಾಲ್ಕು ವರ್ಷಗಳ ಹಿಂದಿನಿಂದ ಇದ್ದ ಕಲಾ ಸಂಬಂಧಿ ಚಟುವಟಿಕೆಯ ಒಂದು ಸಣ್ಣ ಯೋಚನೆ,ಯೋಜನೆ ಇದು.
ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನ ಕರೆಸಿಕೊಂಡು,ಸ್ಥಳೀಯ ಕಲಾವಿದರನ್ನ ಒಳಗೊಂಡು,ಒಂದು ದಿನದ ಅವಧಿಯಲ್ಲಿ,ಬೇರೆ ಬೇರೆ ಪ್ರಸಂಗಗಳ ತಾಳಮದ್ದಳೆಯ ಸಂವಾದ ಕಾರ್ಯಕ್ರಮವನ್ನ ಏರ್ಪಡಿಸೋಣವೆಂದು ಯೋಚಿಸಿ ಸಮಾನ ಮನಸ್ಕ ಕಲಾವಿದರನ್ನ ಸಂಘಟಿಸಿಕೊಂಡು ಮಾಡಿದ ಕಮ್ಮಟ ಇದು.ಇಲ್ಲಿ ಪಾಲ್ಗೊಂಡು ನಮಗೆ ಮಾರ್ಗದರ್ಶನ ಮಾಡಿದ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ,ಮತ್ತು ಶ್ರೀ ರಾಧಾಕೃಷ್ಣ ಕಲ್ಚಾರ್ ಇವರು,ಹಾಗೂ ಅವಲೋಕನಕಾರರಾಗಿ ಉಪಕರಿಸಿದವರು ಮಿತ್ರರಾದ ಡಾ: ಮಹೇಶ ಭಟ್ಡ ಇಡಗುಂದಿ.
ಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಮತ್ತು ಕಲಾಸಕ್ತ ಬಂಧುಗಳೆಲ್ಲರೂ ಇದರ ಸದುಪಯೋಗವನ್ನ ಮಾಡಿಕೊಳ್ಳಬಹುದು ....

コメント