Loading...
「ツール」は右上に移動しました。
利用したサーバー: wtserver3
18いいね 566回再生

ಶ್ರೀರಾಮ ನಿರ್ಯಾಣ.ಸಂವಾದ ಪಂಚಕದ ಐದನೇ ಪ್ರಸಂಗ.ಹಸರಪಾಲಿನಲ್ಲಿ ನಡೆದ ತಾಳಮದ್ದಳೆ ಕಮ್ಮಟ.

ಶ್ರೀರಾಮ ನಿರ್ಯಾಣ.
ಕವಿ:ಹೊಸ್ತೋಟ ಮಂಜುನಾಥ ಭಾಗವತ
ಭಾಗವತರು:ಅನಂತ ಹೆಗಡೆ ದಂತಳಿಗೆ
ಮದ್ದಳೆ:ನರಸಿಂಹ ಭಟ್ಟ ಹಂಡ್ರಮನೆ
ಶ್ರೀರಾಮ: ನರಸಿಂಹ ಭಟ್ಟ ಕುಂಕಿಮನೆ
ಲಕ್ಷ್ಮಣ: ಶ್ರೀಧರ ಅಣಲಗಾರ್
ಹನುಮಂತ: ಶ್ರೀಪಾದ ಮೆಣಸುಮನೆ.
"ಸಂವಾದ ಪಂಚಕ" ಕಾರ್ಯಕ್ರಮದ ಪರಿಕಲ್ಪನೆ: ಅನಂತ ಹೆಗಡೆ ದಂತಳಿಗೆ.

ಸಂಪನ್ಮೂಲ ವ್ಯಕ್ತಿಗಳು: ಶ್ರೀ ರಾಧಾಕೃಷ್ಣ ಕಲ್ಚಾರ್ ,ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ,ಶ್ರೀ ಮಹೇಶ ಭಟ್ಟ ಇಡಗುಂದಿ.
ಕಾರ್ಯಕ್ರಮ ನಿರೂಪಣೆ: ಕುಮಾರಿ ಪಂಚಮಿ ಹಸರಪಾಲ್.
ಪಾತ್ರವರ್ಗ:
ಸಂಪೂರ್ಣ ಸಹಕಾರ ಮತ್ತು ಧ್ವನಿ,ಬೆಳಕು: ಮಹೇಶ ಭಟ್ಟ ಹಸರಪಾಲ್ ಮತ್ತು ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ್.
ಸಹಯೋಗ: ಪ್ರೇರಣಾ ಸಂಸ್ಥೆ ಗುಂದ. ಮತ್ತು ವೀರ ಮಾರುತಿ ತಾಳಮದ್ದಳೆ ಒಕ್ಕೂಟ ಮಾಗೋಡ.ಹಾಗೂ ಯಲ್ಲಾಪುರದ ಹವ್ಯಾಸಿ ಕಲಾವಿದರು.

ಆತ್ಮೀಯರೇ ನಮಸ್ಕಾರ🙏. ಮೂರ್ನಾಲ್ಕು ವರ್ಷಗಳ ಹಿಂದಿನಿಂದ ಇದ್ದ ಕಲಾ ಸಂಬಂಧಿ ಚಟುವಟಿಕೆಯ ಒಂದು ಸಣ್ಣ ಯೋಚನೆ,ಯೋಜನೆ ಇದು.
ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನ ಕರೆಸಿಕೊಂಡು,ಸ್ಥಳೀಯ ಕಲಾವಿದರನ್ನ ಒಳಗೊಂಡು,ಒಂದು ದಿನದ ಅವಧಿಯಲ್ಲಿ,ಬೇರೆ ಬೇರೆ ಪ್ರಸಂಗಗಳ ತಾಳಮದ್ದಳೆಯ ಸಂವಾದ ಕಾರ್ಯಕ್ರಮವನ್ನ ಏರ್ಪಡಿಸೋಣವೆಂದು ಯೋಚಿಸಿ ಸಮಾನ ಮನಸ್ಕ ಕಲಾವಿದರನ್ನ ಸಂಘಟಿಸಿಕೊಂಡು ಮಾಡಿದ ಕಮ್ಮಟ ಇದು.ಇಲ್ಲಿ ಪಾಲ್ಗೊಂಡು ನಮಗೆ ಮಾರ್ಗದರ್ಶನ ಮಾಡಿದ ಹಿರಿಯ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ,ಮತ್ತು ಶ್ರೀ ರಾಧಾಕೃಷ್ಣ ಕಲ್ಚಾರ್,ಹಾಗೂ ಅವಲೋಕನಕಾರರಾಗಿ ಉಪಕರಿಸಿದ ಮಿತ್ರರಾದ ಡಾ: ಮಹೇಶ ಭಟ್ಡ ಇಡಗುಂದಿ ಇವರಿಗೆ ಸಂಘಟನೆ ಆಭಾರಿ.ಹಾಗೇ ಕಮ್ಮಟದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಮತ್ತು ಕಲಾಸಕ್ತ ಬಂಧುಗಳಿಗೆ ಧನ್ಯವಾದಗಳು.
ಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಮತ್ತು ಕಲಾಸಕ್ತ ಬಂಧುಗಳೆಲ್ಲರೂ ಇದರ ಸದುಪಯೋಗವನ್ನ ಮಾಡಿಕೊಳ್ಳಬಹುದು ....

コメント